partner
In life, we often think we need a life partner to live. no, that's not true. What we truly need is: ಮುಂಜಾನೆ ಎದ್ದಾಗ ನಮ್ಮ ಪಕ್ಕದಲ್ಲಿ ಕೂತು 'ತಲೆ ನೇವರಿಸಿ ' ಟೈಮ್ ಆಯ್ತು ಎದ್ದೇಳು ಎಂದು ಪೀಡಿಸುವವರು, ನಾವಿಬ್ಬರೂ ಕೂತು ಕುಡಿವ ದಿನದ ಮೊದಲನೇ ' strong ಕಾಫಿ ', ಇಬ್ಬರೂ ಕೂತು ಕೇಳುವ ಕುಮಾರ್ ಸಾನುವಿನ ' ಹಳೇ ಹಾಡುಗಳು' , ಸಣ್ಣ ವಿಷಯಕ್ಕೆ ನಾವು ಮಾಡುವ ದೊಡ್ಡ ' arguments ' ಗಳು, ನೀ ಕೋಪಗೊಂಡಾಗ ನಾನು ' ಮನವೊಲಿಸುವ ಆ ಹುಡುಗಾಟಿಕೆಯ ಕ್ಷಣ ' ,ತಂದ ತರಕಾರಿಗಳನ್ನು ವಿಂಗಡಿಸಿ fridge ನಲ್ಲಿ ಇಡುವಾಗ ಆಗುವ ' ಸಣ್ಣ ಸಂಭಾಷಣೆ ', ನಮ್ಮಿಬ್ಬರ ನೆಚ್ಚಿನ ಸಿನಿಮಾವನ್ನು ಮತ್ತೆ ನೋಡುವಾಗ ಆಗುವ ಮತ್ತದೇ ' excitement ', ನಾ ಸೋತಾಗ ಕೊಡುವ ಆ ನಿನ್ನ 'ಬಿಗಿಯಾದ ಅಪ್ಪುಗೆ ' , ಬೇಜಾರದಾಗ ಭುಜವನ್ನು ತಾಕಿಸಿ ನೀ ಪಕ್ಕದಲ್ಲಿ ಕೂತಾಗ ಆಗುವ ' ನೆಮ್ಮದಿ ' ,ಮೌನದಲ್ಲೇ ಕೂತರು ನಮ್ಮಿಬ್ಬರಲ್ಲಿ ಸುಲಭವಾಗಿಯಾಗುವ ' ಸರಳ ಸಂಭಾಷಣೆ ', ಏನನ್ನು ಮಾತಾಡದೆ ಸುಮ್ಮನೆ ಕೂತು ನಿನ್ನ ಕೈ ಬೆರಳುಗಳ ಜೊತೆಯಾಡುವ ಆ ' ಕೊಂಚ flirt ness' , ಹಂತ ಹಂತವಾಗಿ ಅರಳುವ ಚಂದ್ರನ ಹೊಳಪಿನಲ್ಲೂ
ಕಂಗೊಳಿಸುವ ಆ ನಿನ್ನ 'ಕಣ್ಣ ನೋಟ ', ಸ್ಪಟಿಕ ಮಣಿ ಯಂತೆ ಜಾರುವ ಆ ನಿನ್ನ ' ಬೆವರ ಸಾಲುಗಳು ', ನನ್ನ ಎದೆಯ ತಾಕುವ ಆ ನಿನ್ನ ಉಸಿರು ...
Now, Imagine a life without all of this, but with just a "partner" who fails to notice such little things.
Comments
Post a Comment