Posts

ಧರ್ಮೋ ರಕ್ಷತಿ ರಕ್ಷಿತಃ !

Image
ವಂಶವೃಕ್ಷ ಎಸ್.ಎಲ್ ಭೈರಪ್ಪ ನವರು ೧೯೬೫ ರಲ್ಲಿ  ಬರೆದಿರುವ ಈ ಕಾದಂಬರಿ ಬರೀ ಆ ಕಾಲ ಘಟಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಕಾಲಕ್ಕೂ ಅನುಗುಣವಾಗುವ  ಒಂದು ಪುಸ್ತಕವಾಗಿದೆ , ಇದು ಬರಿ ಒಂದು ವಂಶದ ಕಥೆಯಾಗದೆ , ಅದಕ್ಕೂ ಮೀರದ ವಿಷಯ ವಸ್ತುಗಳು ಇರುವ ಒಂದು ಮಹಾ ಕಾದಂಬರಿ. ಧರ್ಮೋ ರಕ್ಷತಿ ರಕ್ಷಿತಃ!! ವಂಶವೃಕ್ಷ — ಎಸ್. ಎಲ್. ಭೈರಪ್ಪ ಅವರು ೧೯೬೫ರಲ್ಲಿ ಬರೆದಿರುವ ಈ ಕಾದಂಬರಿ ಕೇವಲ ಆ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗದೆ, ಎಲ್ಲ ಕಾಲಕ್ಕೂ ಅನ್ವಯವಾಗುವ ಒಂದು ಶ್ರೇಷ್ಠ ಕೃತಿ. ಇದು ಕೇವಲ ಒಂದು ವಂಶದ ಕಥೆಯಷ್ಟೇ ಅಲ್ಲ, ಅದಕ್ಕಿಂತಲೂ ಆಳವಾದ ವಿಷಯವಸ್ತುಗಳನ್ನು ಒಳಗೊಂಡಿರುವ ಮಹಾಕಾದಂಬರಿ. ಭಾರತದ ಸಾಂಸ್ಕೃತಿಕ ಇತಿಹಾಸವು ಅಪಾರವಾಗಿದ್ದು, ಅದರ ಮಹತ್ವವನ್ನು ಅರಿತು, ವಂಶದ ಹಿಂದಿನ ಪಿತೃಗಳಿಗಾಗಿ ತನ್ನ ಜೀವನವನ್ನು ಸಮರ್ಪಿಸುವ ನಿಷ್ಠಾವಂತನ ಕಥೆ ಎಂದು ಈ ಕೃತಿಯನ್ನು ಪರಿಗಣಿಸಬಹುದು. ವೈಧವ್ಯ, ಸಂಸಾರ, ಗೃಹಸ್ಥಾಶ್ರಮ, ಸನ್ಯಾಸತ್ವ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಇತ್ಯಾದಿ ವಿಷಯಗಳು ಕಥಾವಸ್ತುವಾಗಿ ಮೂಡಿವೆ. ಧರ್ಮ ಮತ್ತು ಕರ್ಮಗಳನ್ನು ತಕ್ಕಡಿಯಲ್ಲಿ ಹಾಕಿ, ಓದುಗರ ಮನದಲ್ಲಿ ಒಂದು ದ್ವಂದ್ವವನ್ನು ಸೃಷ್ಟಿಸುವ ಈ ಕಾದಂಬರಿ — ಮನುಷ್ಯನು ಸಹಜಗುಣಗಳನ್ನು ಅನುಸರಿಸಿ ಬದುಕಬೇಕೋ? ಅಥವಾ ಇಂದ್ರಿಯಗಳನ್ನು ನಿಗ್ರಹಿಸಿ ಧರ್ಮ, ನೀತಿ, ಶಾಸ್ತ್ರಗಳ ಮಾರ್ಗವನ್ನು ಅನುಸರಿಸಿ ಸದ್ಗತಿಯನ್ನು ಪಡೆಯಬೇಕೋ? ಎಂಬ ಪ್ರಶ್ನೆಯನ್ನು ಮುಂದಿಡುತ್ತದೆ...

partner

In life, we often think we need a life partner to live. no, that's not true. What we truly need is: ಮುಂಜಾನೆ ಎದ್ದಾಗ ನಮ್ಮ ಪಕ್ಕದಲ್ಲಿ ಕೂತು ' ತಲೆ ನೇವರಿಸಿ ' ಟೈಮ್ ಆಯ್ತು ಎದ್ದೇಳು ಎಂದು ಪೀಡಿಸುವವರು, ನಾವಿಬ್ಬರೂ ಕೂತು ಕುಡಿವ ದಿನದ ಮೊದಲನೇ ' strong ಕಾಫಿ ', ಇಬ್ಬರೂ ಕೂತು ಕೇಳುವ ಕುಮಾರ್ ಸಾನುವಿನ ' ಹಳೇ ಹಾಡುಗಳು ' , ಸಣ್ಣ ವಿಷಯಕ್ಕೆ ನಾವು ಮಾಡುವ ದೊಡ್ಡ ' arguments ' ಗಳು, ನೀ ಕೋಪಗೊಂಡಾಗ ನಾನು ' ಮನವೊಲಿಸುವ ಆ ಹುಡುಗಾಟಿಕೆಯ ಕ್ಷಣ ' ,ತಂದ ತರಕಾರಿಗಳನ್ನು ವಿಂಗಡಿಸಿ fridge ನಲ್ಲಿ ಇಡುವಾಗ ಆಗುವ ' ಸಣ್ಣ ಸಂಭಾಷಣೆ ', ನಮ್ಮಿಬ್ಬರ ನೆಚ್ಚಿನ ಸಿನಿಮಾವನ್ನು ಮತ್ತೆ ನೋಡುವಾಗ ಆಗುವ ಮತ್ತದೇ ' excitement ', ನಾ ಸೋತಾಗ ಕೊಡುವ ಆ ನಿನ್ನ ' ಬಿಗಿಯಾದ ಅಪ್ಪುಗೆ ' , ಬೇಜಾರದಾಗ ಭುಜವನ್ನು ತಾಕಿಸಿ ನೀ ಪಕ್ಕದಲ್ಲಿ ಕೂತಾಗ ಆಗುವ ' ನೆಮ್ಮದಿ ' ,ಮೌನದಲ್ಲೇ ಕೂತರು ನಮ್ಮಿಬ್ಬರಲ್ಲಿ ಸುಲಭವಾಗಿಯಾಗುವ ' ಸರಳ ಸಂಭಾಷಣೆ ', ಏನನ್ನು ಮಾತಾಡದೆ ಸುಮ್ಮನೆ ಕೂತು ನಿನ್ನ ಕೈ ಬೆರಳುಗಳ ಜೊತೆಯಾಡುವ ಆ ' ಕೊಂಚ flirt ness ' , ಹಂತ ಹಂತವಾಗಿ ಅರಳುವ ಚಂದ್ರನ ಹೊಳಪಿನಲ್ಲೂ  ಕಂಗೊಳಿಸುವ ಆ ನಿನ್ನ ' ಕಣ್ಣ ನೋಟ ', ಸ್ಪಟಿಕ ಮಣಿ ಯಂತೆ ಜಾರುವ ಆ ನಿನ್ನ ' ಬೆವರ ...

A message to myself

Image
ಎಲ್ಲವನ್ನೂ ಬಿಟ್ಟು ಹೋಗುವ , ಎಲ್ಲವನ್ನೂ ಮರೆತು ಬಿಡುವ , ಎಲ್ಲವನ್ನೂ ತ್ಯಜಿಸಿ ಬಿಡುವ  ಆ ಮನಸ್ಥಿತಿ. ಇಲ್ಲಿ ಎಲ್ಲವೂ ನನ್ನದು ಆದರೆ ಯಾವುದು ನನ್ನದಲ್ಲ ವೆನ್ನುವ ಆ ಖಾಲಿ - ಖಾಲಿ ಯೋಚನಾ ಲಹರಿ,  ಅಲಮಾರಿಯಂತೆ  ನೆಡೆದು ಕಾಣದ ಯಾವುದೋ  ಊರಿಗೆ ಹೋಗಿ ಬಿಡ್ಬೇಕು , ಅರಿಯುವ ನದಿಯಲ್ಲಿ ಮಿಂದು  ಹಕ್ಕಿಯಂತೆ ಸ್ವತಂತ್ರವಾಗಿ ಹಾರಡ ಬೇಕು, ನನ್ನದಲ್ಲದ ಊರಿನಲ್ಲಿ ನನ್ನದಲ್ಲದ ಹೆಸರಿನಲ್ಲಿ ,  ಯಾವುದೇ ಅಸ್ತಿತ್ವವಿಲ್ಲದ identity ಯಲ್ಲಿ ಬದುಕ ಬೇಕು, ಪ್ರತಿ ದಿನವೂ ಸಂಚಾರ ಮಾಡ್ತಾ , ಕಂಡದ್ದನ್ನು ತಿನ್ನುತ್ತಾ, ಸಿಕ್ಕವರೆಲ್ಲ ನಮ್ಮವರೇ ಅಂದು ಕೊಳ್ಳುತ್ತಾ, (ಅರೇ  ನಮ್ಮವರೇ ಅಲ್ಲವೇ?), ಬದುಕಿ ಬಿಡ ಬಹುದಲ್ಲವೇ ? ಈ ರೀತಿಯ ಮನಸ್ಥಿತಿ ಬರುವುದಕ್ಕೆ ಕಾರಣವಾದರು ಏನು?, ಮನುಷ್ಯ ಸಂಗ ಜೀವಿಯಲ್ಲವೇ?, ಮನುಷ್ಯ ಮನುಷ್ಯರ ಜೊತೆ ಬದುಕಿ ಬಿಡುವುದೇ ಅಲ್ಲವೇ ಮನುಷ್ಯನ ಸಹಜ ಗುಣ ?  ಅಥವಾ is this, The Temptation to Escapism? ಮನುಷ್ಯನದ್ದು ಅನ್ನೋದು ಆದ್ರೂ ಇಲ್ಲಿ ಏನಿದೆ ? ,ಅವನು ಗಳಿಸದ್ದು ಆದರೂ ಇಲ್ಲಿ ಏನಿದೆ ?, ಇಲ್ಲಿ ಇದದ್ದನ್ನೇ ಅಲ್ಲವೇ ಅವನು ಕಂಡು ಕೊಂಡಿರೋದು , ಕೊಂಡು ಕೊಂಡಿರೋದು ಹಾಗು ಇದದ್ದನ್ನೇ ಅಲ್ಲವೇ ಅವನು ಕೊಂದು  ಪಾಲು ಮಾಡಿ ಕೊಂಡಿರೋದು, ಇಲ್ಲಿ ಇರೋದನ್ನೇ ಅವನು ಕಂಡು ಕೊಂಡಿರುವುದು ಆದರೆ ಅವನದ್ದು ಅನ್ನೋದು ಇಲ್ಲಿ ಏನಿದೆ ?? ಇಲ್ಲಿ ಅವನದ್ದು  / ಯ...

ಹೇಳಿ ಹೋಗು ಕಾರಣ

Image
ಬಹುಶಃ ಬೇರೆಲ್ಲಾ ಕಾದಂಬರಿಗಳನ್ನು ಓದಿದ ರೀತಿ ಈ ಕಾದಂಬರಿಯನ್ನೂ ನಾನೂ ಒಂದೇ ಗುಟುಕಿನಲ್ಲಿ ಓದಿ ಮುಗಿಸಿ ಬಿಟ್ಟಿದ್ದರೆ , ಆ ಪಾತ್ರಗಳ ತೀವ್ರತೆಯನ್ನೂ ನಾನು ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನಿಸುತ್ತದೆ , ತೀರಾ ಬಾಯಾರಿಕೆ ಆದಾಗ ನಾವು ಕುಡಿವ ಮೊದಲ ಗುಟಕು ಕೊಡುವ ಆ ಒಂದು ಸಂತೃಪ್ತಿಯನ್ನೂ ಕೊನೆಯ ಗುಟುಕಿನ ತನಕ ಕಾದಿರಿಸುವ ಒಂದು ಸಣ್ಣ ಪ್ರಯತ್ನಕ್ಕೆ ನಾನು ಈ ಪುಸ್ತಕವನ್ನು ತುಂಬಾ ದಿನಗಳವರೆಗೆ ಓದಲು ಅಣಿ ಮಾಡಿದ್ದೆ. ಆ ಪಾತ್ರಗಳು , ಜೀವಗಳಿರುವ ಮನುಷ್ಯರಂತೇ ನನ್ನನ್ನು ತೀರಾ ಕಾಡುತ್ತಿದೆ ಎಂದಾಗ ಅಥವಾ "ಹಿಮವಂತ"ನಂತೇ ಮನುಷ್ಯರು ಇನ್ನು ಬದುಕಿ ಉಳಿದಿದ್ದಾರ ಈ ಭೂಮಿಯಲ್ಲಿ ? ಎಂದು ಅನಿಸಿದಾಗ , ನಾನು ದೇವರ ಮುಂದೆ ಕೂತು ಹೇಳುತ್ತಿದ್ದ .... "ಯಾಕುಂದೆಂದೂ ತುಷಾರ ಹಾರದವಳ " ಶ್ಲೋಕವನ್ನೆ ಹೇಳುತ್ತಿದ್ದ ಪ್ರಾರ್ಥಾನ ಕೂಡ ನೆನಪಾದಾಗ, ಪ್ರತಿವಾರ ಅಥವಾ ಯಾವಾಗಲೋ ಒಮ್ಮೆ ಈ ಪುಸ್ತಕವನ್ನು ಕೈಗೆತ್ತು ಕೊಳ್ಳುತ್ತಿದ್ದೆ ,ಮತ್ತು ಪುಸ್ತಕವನ್ನು ಒಂದು ಸೀರಿಯಲ್ ನಂತೆ ಬಿಡಿ ಬಿಡಿಯಾಗಿ ಓದಿ ಅಕ್ಷರ ರಾಕ್ಷಸನ ಅಕ್ಷರವನ್ನು ಸ್ವಾದಿಸುತ್ತಿದ್ದೆ ಹಾಗೂ ನನ್ನನು ನಾನು ರವಿ ಬೆಳೆಗೆರೆಯ ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದೆ ಮತ್ತು ಅಲ್ಲೇ ಇದ್ದು ಬಿಡಲು ಯತ್ನಿಸುತ್ತಿದ್ದೆ...... ಹಿಮವಂತನ ಗಾಡಿಕೊಪ್ಪದ ಒಂದು ಸಣ್ಣ ಮನೆ, ಅವನ ಅದೆ ಕಡು ನೀಲಿ ಜೀನ್ಸ್ ಪ್ಯಾಂಟು ಮತ್ತು ಒರಟು ಜುಬ್ಬಾ ಈ ರೀತ...

ಚಂದ್ರೋದಯ

ಜಗತ್ತಿಗೆಲ್ಲಾ ಬೆಳಕು ಕೊಟ್ಟ ಸೂರ್ಯನಿಗೆ ಯಾಕೋ ದಣಿವಾದಂತಿದೆ . ಭೂಮಿಗೆ ಬೆಳಕು ನೀಡುವುದೆ ತನ್ನ ಕಾಯಕವೆಂದು ನಂಬಿರುವ ಸೂರ್ಯ ತನ್ನ ಕೆಲಸವನ್ನು ಮುಗಿಸಿ ಜೋರಾಗಿ ಉಸಿರು ಬಿಟ್ಟು ತನ್ನ ಮನೆಗೆ ಹಿಂದಿರುಗುವ ಆತುರದಲ್ಲಿದ್ದಾನೆ ಅವನಲ್ಲಿದ್ದ ಜ್ವಾಲೆ ಕಡಿಮೆಯಾದಂತಿದೆ ಅವನು ಶಾಂತ ಸ್ವರೂಪಿಯಾಗಿ ಕಾಣುತ್ತಲ್ಲಿದ್ದಾನೆ . ತಾಯಿ ತನ್ನ ಮಕ್ಕಳನ್ನು ಶಾಲೆಗೆ ಬೀಳ್ಕೊಡುವ ರೀತಿ ಬೆಳಗ್ಗಿನಿಂದ ಜೊತೆಯಲ್ಲಿದ್ದು ಹೊರಟ ಸೂರ್ಯನಿಗೆ ಬೀಳ್ಕೊಡಲು ಮರದ ಹಸಿರು ಎಲೆಗಳು ಗಾಳಿಗೆ ತಲೆ ತೂಗುತ್ತ ನಿಂತಿವೆ. ಇದಕ್ಕೆ ಸಾಕ್ಷಿಯಾಗಿ ಕೂತ ಎರಡು ಪ್ರೇಮ ಪಾರಿವಾಳಗಳಿಗೆ ಜಗತ್ತಿನ ಅರಿವು ಇಲ್ಲ , ಅವರು ತಮ್ಮದೇ ಪ್ರೀತಿ ರಾಜ್ಯದಲ್ಲಿ ರಮಿಸುತ್ತಿರುವ ರಾಜ ರಾಣಿ .  ಆ ರಾಜ್ಯದಲ್ಲಿ ಅವರಿಗೆ ಕಸಿ ಬಿಸಿ ಸಮಯ ಉರುಳಿ ಹೋಗುತ್ತಿದೆಯಲ್ಲ ಎಂಬ ನೋವು ಹತಾಶೆ ಹಾಗೂ ಅಸಹಾಯಕತೆ ,ಮತ್ತಿನ್ನು ಈ ಭೇಟಿಗೆ ಇನ್ನೆಷ್ಟು ದಿನ ವ್ರತ ಮಾಡಿ ಕಾಯ ಬೇಕೆಂಬ ಒಂದು ವಿರಹ ಸಂಕಟ. ತನ್ನ ಗೆಳತಿ ಹಚ್ಚಿರುವ ಕಣ್ಣಿನ ಕಾಡಿಗೆಯನ್ನೆ ಶ್ರದ್ಧೆಯಿಂದ ನೋಡುತ್ತಾ ಕೂತಿರುವ ಅವನಲ್ಲಿ ಒಂದು ಋಷಿಯ ಮೌನ ಆಸೆಯಿಂದ ಅವಳ ಅಷ್ಟೂ ಕೈ ಬೆರಳುಗಳನ್ನು ತನ್ನ ಅಂಗೈಯಲ್ಲಿ ಮಡಿಚಿಟ್ಟುಕೊಂಡು ಅವಳ ಮುಂಗುರುಳುಗಳನ್ನು ಅಷ್ಟೇ ಶ್ರದ್ದೆಯಿಂದ ಸವರಿ ಅವಳ ಪ್ರೀತಿಯ ಅಪ್ಪುಗೆಗೆ ಶರಣಾಗಿದ್ದಾನೆ. ವಿಗ್ರಹದಂತೆ ಸದೃಶನಾಗಿ ಕುತವನ ಮನದ ತುಂಬಾ ಅವಳ ಹೆಸರು ಸಹಸ್ರ ಅಷ್ಟೋತ್ತರವಾಗಿ ಹೋಗಿದೆ ,ಅವಳ ಉಸಿರು ಇವನ ...