ಚಂದ್ರೋದಯ

ಜಗತ್ತಿಗೆಲ್ಲಾ ಬೆಳಕು ಕೊಟ್ಟ ಸೂರ್ಯನಿಗೆ ಯಾಕೋ ದಣಿವಾದಂತಿದೆ .
ಭೂಮಿಗೆ ಬೆಳಕು ನೀಡುವುದೆ ತನ್ನ ಕಾಯಕವೆಂದು ನಂಬಿರುವ ಸೂರ್ಯ ತನ್ನ ಕೆಲಸವನ್ನು ಮುಗಿಸಿ ಜೋರಾಗಿ ಉಸಿರು ಬಿಟ್ಟು ತನ್ನ ಮನೆಗೆ ಹಿಂದಿರುಗುವ ಆತುರದಲ್ಲಿದ್ದಾನೆ ಅವನಲ್ಲಿದ್ದ ಜ್ವಾಲೆ ಕಡಿಮೆಯಾದಂತಿದೆ ಅವನು ಶಾಂತ ಸ್ವರೂಪಿಯಾಗಿ ಕಾಣುತ್ತಲ್ಲಿದ್ದಾನೆ .
ತಾಯಿ ತನ್ನ ಮಕ್ಕಳನ್ನು ಶಾಲೆಗೆ ಬೀಳ್ಕೊಡುವ ರೀತಿ
ಬೆಳಗ್ಗಿನಿಂದ ಜೊತೆಯಲ್ಲಿದ್ದು ಹೊರಟ ಸೂರ್ಯನಿಗೆ ಬೀಳ್ಕೊಡಲು ಮರದ ಹಸಿರು ಎಲೆಗಳು ಗಾಳಿಗೆ ತಲೆ ತೂಗುತ್ತ ನಿಂತಿವೆ.
ಇದಕ್ಕೆ ಸಾಕ್ಷಿಯಾಗಿ ಕೂತ ಎರಡು ಪ್ರೇಮ ಪಾರಿವಾಳಗಳಿಗೆ ಜಗತ್ತಿನ ಅರಿವು ಇಲ್ಲ , ಅವರು ತಮ್ಮದೇ ಪ್ರೀತಿ ರಾಜ್ಯದಲ್ಲಿ ರಮಿಸುತ್ತಿರುವ ರಾಜ ರಾಣಿ . 
ಆ ರಾಜ್ಯದಲ್ಲಿ ಅವರಿಗೆ ಕಸಿ ಬಿಸಿ ಸಮಯ ಉರುಳಿ ಹೋಗುತ್ತಿದೆಯಲ್ಲ ಎಂಬ ನೋವು ಹತಾಶೆ ಹಾಗೂ ಅಸಹಾಯಕತೆ ,ಮತ್ತಿನ್ನು ಈ ಭೇಟಿಗೆ ಇನ್ನೆಷ್ಟು ದಿನ ವ್ರತ ಮಾಡಿ ಕಾಯ ಬೇಕೆಂಬ ಒಂದು ವಿರಹ ಸಂಕಟ.
ತನ್ನ ಗೆಳತಿ ಹಚ್ಚಿರುವ ಕಣ್ಣಿನ ಕಾಡಿಗೆಯನ್ನೆ ಶ್ರದ್ಧೆಯಿಂದ ನೋಡುತ್ತಾ ಕೂತಿರುವ ಅವನಲ್ಲಿ ಒಂದು ಋಷಿಯ ಮೌನ ಆಸೆಯಿಂದ ಅವಳ ಅಷ್ಟೂ ಕೈ ಬೆರಳುಗಳನ್ನು ತನ್ನ ಅಂಗೈಯಲ್ಲಿ ಮಡಿಚಿಟ್ಟುಕೊಂಡು ಅವಳ ಮುಂಗುರುಳುಗಳನ್ನು ಅಷ್ಟೇ ಶ್ರದ್ದೆಯಿಂದ ಸವರಿ ಅವಳ ಪ್ರೀತಿಯ ಅಪ್ಪುಗೆಗೆ ಶರಣಾಗಿದ್ದಾನೆ.
ವಿಗ್ರಹದಂತೆ ಸದೃಶನಾಗಿ ಕುತವನ ಮನದ ತುಂಬಾ ಅವಳ ಹೆಸರು ಸಹಸ್ರ ಅಷ್ಟೋತ್ತರವಾಗಿ ಹೋಗಿದೆ ,ಅವಳ ಉಸಿರು ಇವನ ಉಸಿರೊಡನೆ ಲೀನವಾಗಿ ಹೋಗಿದೆ ,ತನ್ನ ಅಷ್ಟೂ ಜೀವನವನ್ನ ಅವಳ ಜೊತೆ ಕಲ್ಪಿಸಿಕೊಂಡು ಕುತವನ ತುಟಿಗಳಲ್ಲಿ ಒಂದು ಸಣ್ಣ ನಗು ತನಗೆ ಗೊತ್ತಿಲ್ಲದೆ ಪಸರಿಸಿತು. ತನ್ನ ಸೋನಾಟಾ ಕೈ ಗಡಿಯಾರದ ಮುಳ್ಳು ಏಳು ಗಂಟೆ ದಾಟಿ ಮುಂದಕ್ಕೆ ಚಲಿಸುತ್ತಿದ್ದಿದ್ದು ಹಾಗೂ ಅವಳಿಗೆ ಇನ್ನೂ ಹೊರಡುವ ಸಮಯ ಬಂದು ನಿಂತಿದೆ ಎಂದು ಗೊತ್ತಾಗಿ ಅವನ ಎದೆಯ ಪುಟ್ಟ ಗೂಡಿನಲ್ಲಿ ಸಣ್ಣ ತಳಮಳ.
"ಸರಿ ಲೆಟ್ಸ್ ಲೀವ್ ,ಟೈಮ್ ಆಯ್ತು ಕಣೆ ನಿನಗೆ"!ಅಂದವನ ಧ್ವನಿಯಲ್ಲಿ ಮಾರುಕವಿತ್ತು , ಎದೆ ಭಾರವಾಗಿತ್ತು . ಇಬ್ಬರು ಅಪ್ಪಿದರು,ಅಪ್ಪುಗೆಗೆ ನೀರು ಆವಿಯಾಗುವ ರೀತಿ ಅವರ ಮನಸು ಹಗುರವಾಗಿ ನೆಮ್ಮದಿಯಾಯಿತು. ಕತ್ತಲು ಆವರಿಸುತ್ತಿದ್ದ ಮಂಕು ಸಂಜೆಯಲ್ಲು ಅವಳು ಅವನ ಭುಜವನ್ನು ತಾಕಿಸಿ ,ಅವನ ಕೈ ಹಿಡಿದು ಅವನ ಕಿವಿಯಲ್ಲಿ ಗುನುಗಿದ್ದು ಮತ್ತದೇ ಹಾಡು..🎶

"ಜೀವ ಹೂವಾಗಿದೆ,ಭಾವ ಜೇನಾಗಿದೆ, 
ಬಾಳು ಹಾಡಗಿದೆ ,ನಿನ್ನ ಸೇರಿ ನಾನು"
ಮತ್ತು ಇಬ್ಬರು ಧ್ವನಿ ಗೂಡಿಸಿ ಹಾಡಿದ 
ಮತ್ತದೇ "ಐ ಲವ್ ಯು" , "ಐ ಲವ್ ಯು" ಎಂಬಾ 
ಹಾಡಿನ ಕೊನೆಯ ಸಾಲು.
ಹಿಂತಿರುಗಿ ನೋಡಿದರೆ ಚಂದ್ರೋದ್ಯವಾಗಿ ಚಂದಿರ ಅವರ ಪ್ರೇಮ ಪಲ್ಲಟವನ್ನು ಕದ್ದು ನೋಡುತ್ತಾ ನಾಚಿ  ನಿಂತಿದ್ದಾನೆ.
ಇಬ್ಬರ ಮುಖ ಕಮಲದಲ್ಲಿ ಒಂದು ನಗು ಹಾಗೂ ಕೊಂಚ ನಾಚಿಕೆ ಹಾಗೂ ಒಂದು ಸಮಾಧಾನ.
ಇನ್ನೂ ಸಾವಿರ ಚಂದಿರನಾ ರಾತ್ರಿಗೆ ಅವರು ಸಾಕ್ಷಿಯಾಗ ಬೇಕೆಂದು ತಮ್ಮ ಮನಸಿನಲ್ಲೇ ಅಂದುಕೊಂಡು ಅಲ್ಲಿಂದ ಮನಸಿಲ್ಲದ ಮನಸನಿಂದ ಹೊರಟರು.
ಮರದ ಎಲೆಗಳು , ಆಷಾಡ ಮಾಸಕ್ಕೆ ಸುಯ್ಯೆಂದು ಬೀಸುತ್ತಿದ್ದ ಗಾಳಿ ಮತ್ತು ಆಕಾಶಕ್ಕೆ ಆಗ ತಾನೇ ಆಗಮಿಸುತ್ತಿದ್ದ ರಾಶಿ ನಕ್ಷತ್ರಗಳು ಈ ಮುಗ್ದ ಪ್ರೇಮಿಗಳನ್ನು ಕಂಡು ಒಮ್ಮೆ ನಕ್ಕರು.
                                        -     ಕವಿರತ್ನ ಕೋಳಿದಾಸ

Comments

Popular posts from this blog

ಧರ್ಮೋ ರಕ್ಷತಿ ರಕ್ಷಿತಃ !

ಹೇಳಿ ಹೋಗು ಕಾರಣ