ಹೇಳಿ ಹೋಗು ಕಾರಣ

ಬಹುಶಃ ಬೇರೆಲ್ಲಾ ಕಾದಂಬರಿಗಳನ್ನು ಓದಿದ ರೀತಿ ಈ ಕಾದಂಬರಿಯನ್ನೂ ನಾನೂ ಒಂದೇ ಗುಟುಕಿನಲ್ಲಿ ಓದಿ ಮುಗಿಸಿ ಬಿಟ್ಟಿದ್ದರೆ , ಆ ಪಾತ್ರಗಳ ತೀವ್ರತೆಯನ್ನೂ ನಾನು ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನಿಸುತ್ತದೆ , ತೀರಾ ಬಾಯಾರಿಕೆ ಆದಾಗ ನಾವು ಕುಡಿವ ಮೊದಲ ಗುಟಕು ಕೊಡುವ ಆ ಒಂದು ಸಂತೃಪ್ತಿಯನ್ನೂ ಕೊನೆಯ ಗುಟುಕಿನ ತನಕ ಕಾದಿರಿಸುವ ಒಂದು ಸಣ್ಣ ಪ್ರಯತ್ನಕ್ಕೆ
ನಾನು ಈ ಪುಸ್ತಕವನ್ನು ತುಂಬಾ ದಿನಗಳವರೆಗೆ ಓದಲು ಅಣಿ ಮಾಡಿದ್ದೆ.

ಆ ಪಾತ್ರಗಳು , ಜೀವಗಳಿರುವ ಮನುಷ್ಯರಂತೇ ನನ್ನನ್ನು ತೀರಾ ಕಾಡುತ್ತಿದೆ ಎಂದಾಗ ಅಥವಾ "ಹಿಮವಂತ"ನಂತೇ ಮನುಷ್ಯರು ಇನ್ನು ಬದುಕಿ ಉಳಿದಿದ್ದಾರ ಈ ಭೂಮಿಯಲ್ಲಿ ? ಎಂದು ಅನಿಸಿದಾಗ , ನಾನು ದೇವರ ಮುಂದೆ ಕೂತು ಹೇಳುತ್ತಿದ್ದ ....
"ಯಾಕುಂದೆಂದೂ ತುಷಾರ ಹಾರದವಳ " ಶ್ಲೋಕವನ್ನೆ ಹೇಳುತ್ತಿದ್ದ ಪ್ರಾರ್ಥಾನ ಕೂಡ ನೆನಪಾದಾಗ,
ಪ್ರತಿವಾರ ಅಥವಾ ಯಾವಾಗಲೋ ಒಮ್ಮೆ ಈ ಪುಸ್ತಕವನ್ನು ಕೈಗೆತ್ತು ಕೊಳ್ಳುತ್ತಿದ್ದೆ ,ಮತ್ತು ಪುಸ್ತಕವನ್ನು ಒಂದು ಸೀರಿಯಲ್ ನಂತೆ ಬಿಡಿ ಬಿಡಿಯಾಗಿ ಓದಿ ಅಕ್ಷರ ರಾಕ್ಷಸನ ಅಕ್ಷರವನ್ನು ಸ್ವಾದಿಸುತ್ತಿದ್ದೆ ಹಾಗೂ ನನ್ನನು ನಾನು ರವಿ ಬೆಳೆಗೆರೆಯ ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದೆ ಮತ್ತು ಅಲ್ಲೇ ಇದ್ದು ಬಿಡಲು ಯತ್ನಿಸುತ್ತಿದ್ದೆ......

ಹಿಮವಂತನ ಗಾಡಿಕೊಪ್ಪದ ಒಂದು ಸಣ್ಣ ಮನೆ, ಅವನ ಅದೆ ಕಡು ನೀಲಿ ಜೀನ್ಸ್ ಪ್ಯಾಂಟು ಮತ್ತು ಒರಟು ಜುಬ್ಬಾ ಈ ರೀತಿಯಾದ ಸಣ್ಣ ಡೀಟೇಲ್ಸ್ ಗಳಿಂದ ಅವನ ಘಾಡವಾದ ಹಾಗೂ ಅತ್ಯಂತ ನಿಷ್ಕಲ್ಮಶವಾದ ಪ್ರೀತಿ ಎಡ ಬಿಡದೆ ನನ್ನನು ಕಾಡಿ ಬಿಟ್ಟಿದೆ , 

ಊರ್ಮಿಳಾನಂತ ಒಂದು ಟಫ್ ಹುಡ್ಗಿ ಇಂತ ಮಿಠಾಯಿ ಮಾರುವ ಸಾಮಾನ್ಯ ಹುಡುಗನ ಅಭೂತವಾದ ಪ್ರೇಮವನ್ನು ಕಂಡು ಅವನ ಸಹಚರ್ಯಕ್ಕೆ ಸೋತು
ಬದಲಾಗಿ ಹೋದಾಗ ,ನಿಮ್ಮಲೊಬ್ಬ ಸ್ನೇಹಿತ ಕುಡಿತ ಸಿಗರೇಟ್ ಬಿಟ್ಟು ಒಳ್ಳೆಯ ದಾರಿಗೆ ಬಂದಾಗ ಆಗುವಷ್ಟು ಸಮಾಧಾನವೆ ನನಗೂ ಆಗಿ ಬಿಟ್ಟಿತು.
"ದೇವರಿಗೆ ಮೋಸ ಮಾಡೋಕೆ ಸಾಧ್ಯವೇ "? ಎಂದು ಪದರ ಪದರವಾಗಿ ಬದಲು ಆಗುವ ಪ್ರಾರ್ಥನಾ ಕಂಡು ಅಯ್ಯೋ "ಡಾಕ್ಟ್ರೆ" ನೀವು ತಪ್ಪು ಮಾಡುತ್ತಿದ್ದೀರ ಎಂದು ನಾನೇ ಕುದ್ದಾಗಿ ದಾವಣಗೆರೆಯ ಮೆಡಿಕಲ್ ಕಾಲೇಜ್ ಗೆ ಬಂದು ಹೇಳಿ ಬಿಡೋಣವೆನ್ನುವಷ್ಟು ಕತೆಯಲ್ಲಿ ಲೀನವಾಗಿ ಹೋಗಿದ್ದೆ......

ದೇವರು ಮತ್ತು ಮನುಷ್ಯರಲ್ಲಿರುವ ಭಿನ್ನತೆ, ಪ್ರೀತಿ ಹಾಗೂ ದೇಹ ವಾಂಛೆಗಿರುವ ಒಂದು ಅಂತರ ,ಪ್ರೇಮ , ಕಾಳಜಿ , ಕಾರುಣ್ಯ ಹೀಗೆ ಯಾವ ಆರ್ಥಗಳಿಗು 
ಚುತಿ ಬರದಾಗೆ ತುಂಬಾ ಅಚ್ಚು ಕಟ್ಟಾಗಿ ಎಲ್ಲವನ್ನೂ ಮನ ಕಲಕುವಂತೆ ಮನ ದಟ್ಟಾಗಿ ಬಿಟ್ಟಿದೆ.

ಆದರೆ ಇವತ್ತು ಕತೆ ಮುಗಿದು ಹೋಗಿದೆ,
ಹಾಗೂ ಮತ್ತೊಂದು ಕನಸು ಕಾಣುವ ಸಮಯ ಬಂದಿದೆ ಆದರೆ
ಹಿಮವಂತ , ಪ್ರಾರ್ಥನಾ ಎಂಬಾ ಪಾತ್ರಗಳು ಮಾತ್ರ ನನ್ನ ಮೆದುಳಿನ ಕಣ ಕಣದಲ್ಲು ಉಳಿದು ಹೋಗಿದೆ !

ರವಿ ಬೆಳಗೆರೆ ಸಾರ್ ನೀವು ಬಹುಶಃ ಬದುಕಿದ್ದರೆ ನಿಮ್ಮ ಕೈಗೆ ಒಂದು ಮುತ್ತಿಕ್ಕುವ ಆಸೆ ನನ್ನದಾಗಿತ್ತು , ಆದರೆ ನಿಮ್ಮ ಪುಸ್ತಕದಲ್ಲಿ ಇರುವ ನಿಮ್ಮ ಭಾವ ಚಿತ್ರಕ್ಕೆ ಮುತ್ತಿಕ್ಕಿ ಸುಮ್ಮನಾಗಿ ಬಿಟ್ಟಿದ್ದೇನೆ.

ಹಾಗೂ "ಏನ್ ಸಕ್ಕತಾಗಿ ಬರೀತ್ತಾನೆ ನನ್ಮಗ" ಎಂಬಾ ನಿಮ್ಮ ಪ್ರೀತಿಯ ಅವಾರ್ಡ ಪುಸ್ತಕವನ್ನು ಮಡಿಚಿ ಕೊನೆಯ ಪೇಜ್ ಗೆ ಇಟ್ಟು ಕೊಟ್ಟಿ ಬಿಟ್ಟಿದ್ದೇನೆ ಸಾರ್ ಒಪ್ಪಿಸಿಕೊಳ್ಳಿ......!!

                                            -    ಕವಿರತ್ನ ಕೋಳಿದಾಸ

Comments

Popular posts from this blog

ಚಂದ್ರೋದಯ

ಧರ್ಮೋ ರಕ್ಷತಿ ರಕ್ಷಿತಃ !