A message to myself
ಎಲ್ಲವನ್ನೂ ಬಿಟ್ಟು ಹೋಗುವ , ಎಲ್ಲವನ್ನೂ ಮರೆತು ಬಿಡುವ , ಎಲ್ಲವನ್ನೂ ತ್ಯಜಿಸಿ ಬಿಡುವ ಆ ಮನಸ್ಥಿತಿ.
ಇಲ್ಲಿ ಎಲ್ಲವೂ ನನ್ನದು ಆದರೆ ಯಾವುದು ನನ್ನದಲ್ಲ ವೆನ್ನುವ ಆ ಖಾಲಿ - ಖಾಲಿ ಯೋಚನಾ ಲಹರಿ,
ಅಲಮಾರಿಯಂತೆ ನೆಡೆದು ಕಾಣದ ಯಾವುದೋ ಊರಿಗೆ ಹೋಗಿ ಬಿಡ್ಬೇಕು , ಅರಿಯುವ ನದಿಯಲ್ಲಿ ಮಿಂದು ಹಕ್ಕಿಯಂತೆ ಸ್ವತಂತ್ರವಾಗಿ ಹಾರಡ ಬೇಕು,
ನನ್ನದಲ್ಲದ ಊರಿನಲ್ಲಿ ನನ್ನದಲ್ಲದ ಹೆಸರಿನಲ್ಲಿ , ಯಾವುದೇ ಅಸ್ತಿತ್ವವಿಲ್ಲದ identity ಯಲ್ಲಿ ಬದುಕ ಬೇಕು,
ಪ್ರತಿ ದಿನವೂ ಸಂಚಾರ ಮಾಡ್ತಾ , ಕಂಡದ್ದನ್ನು ತಿನ್ನುತ್ತಾ, ಸಿಕ್ಕವರೆಲ್ಲ ನಮ್ಮವರೇ ಅಂದು ಕೊಳ್ಳುತ್ತಾ, (ಅರೇ
ನಮ್ಮವರೇ ಅಲ್ಲವೇ?), ಬದುಕಿ ಬಿಡ ಬಹುದಲ್ಲವೇ ?
ಈ ರೀತಿಯ ಮನಸ್ಥಿತಿ ಬರುವುದಕ್ಕೆ ಕಾರಣವಾದರು ಏನು?, ಮನುಷ್ಯ ಸಂಗ ಜೀವಿಯಲ್ಲವೇ?, ಮನುಷ್ಯ ಮನುಷ್ಯರ ಜೊತೆ ಬದುಕಿ ಬಿಡುವುದೇ ಅಲ್ಲವೇ ಮನುಷ್ಯನ ಸಹಜ ಗುಣ ?
ಅಥವಾ is this,The Temptation to Escapism?
ಮನುಷ್ಯನದ್ದು ಅನ್ನೋದು ಆದ್ರೂ ಇಲ್ಲಿ ಏನಿದೆ ? ,ಅವನು ಗಳಿಸದ್ದು ಆದರೂ ಇಲ್ಲಿ ಏನಿದೆ ?, ಇಲ್ಲಿ ಇದದ್ದನ್ನೇ ಅಲ್ಲವೇ ಅವನು ಕಂಡು ಕೊಂಡಿರೋದು , ಕೊಂಡು ಕೊಂಡಿರೋದು ಹಾಗು ಇದದ್ದನ್ನೇ ಅಲ್ಲವೇ ಅವನು ಕೊಂದು
ಪಾಲು ಮಾಡಿ ಕೊಂಡಿರೋದು, ಇಲ್ಲಿ ಇರೋದನ್ನೇ ಅವನು
ಕಂಡು ಕೊಂಡಿರುವುದು ಆದರೆ ಅವನದ್ದು ಅನ್ನೋದು ಇಲ್ಲಿ ಏನಿದೆ ??
ಇಲ್ಲಿ ಅವನದ್ದು /ಯಾರದ್ದು ಏನು ಇಲ್ಲಾ, ಬದುಕು ನಶ್ವರ !!
ಬಹುಶಃ ಅವನು Time ಕಂಡು ಹಿಡಿದಿರ ಬಹುದು, ದಿನಗಳಿಗೆ ಹೆಸರನ್ನು ಇಟ್ಟಿರಬಹುದು , ಜಾಗಗಳಿಗೆ ನಾಮಕರಣ ಮಾಡಿರಬಹುದು , ಪ್ರಾಣಿಗಳಿಗೆ , ಗಿಡಗಳಿಗೆ, ಮರಗಳಿಗೆ ಎಲ್ಲವನ್ನೂ ಗುರುತು ಹಿಡಿಯಲು ಅವನದ್ದೇ ಆದ ಒಂದು terminology ಕೊಟ್ಟಿರಬಹುದು.
ಅದೆಲ್ಲವೂ ಅವನ ಅನೂಕುಲಕ್ಕಾಗಿ ಮಾಡಿಕೊಂಡಿದ್ದಾನೆ ಅಷ್ಟೇ ಅಲ್ಲವೇ?! ,
ಅವನು ಮಾಡಿರೋದು ಎಲ್ಲವು
ಬದುಕುವ ರೀತಿಯನ್ನು ಸುಲಭವಾಗಿಸಲು ಅಷ್ಟೇ ಅಲ್ಲವೇ?!
ಅವನ ನಿಯಮಗಳನ್ನು ಸರಿ ಎಂದು approve
ಮಾಡಿರುವುದು ಆದರೂ ಯಾರು ?
ಪ್ರಕೃತಿಗೆ ಯಾವ ನಿಯಮಗಳು ಇಲ್ಲವೇನೋ?,
ಕಾಲ ಕಟ್ಟಳೆಗಳು ಇಲ್ಲವೇನೋ?,
ಪ್ರಕೃತಿ ಯಾರನ್ನೂ ,ಯಾವುದನ್ನು ,ಯಾವುದಕ್ಕೂ ಬೇಧ ಭಾವ ಮಾಡುದಿಲ್ಲವೇನೋ ?
ನಾವು ಪ್ರಕೃತಿಯಾಗ ಬೇಕು, ನಾವು ಪ್ರಕೃತಿಗೆ ಹತ್ತಿರವಾಗ ಬೇಕು, ಬಹುಶಃ ಆಗ ನಾವು ಮತ್ತೆ ಮನುಷ್ಯರಾಗುತ್ತೇವೆ.
Comments
Post a Comment